ವಿಜಯಪುರದ ಚಪ್ಪರಬಂದ್ ಏರಿಯಾ ಈಗ ಕ್ಲಸ್ಟರ್ ಜೋನ್ ಪ್ರದೇಶ..ಸಚಿವೆ ಶಶಿಕಲಾ ಜೊಲ್ಲೆ ಘೋಷಣೆ

ವಿಜಯಪುರದ ಚಪ್ಪರಬಂದ್ ಏರಿಯಾ ಈಗ ಕ್ಲಸ್ಟರ್ ಜೋನ್ ಪ್ರದೇಶ..ಸಚಿವೆ ಶಶಿಕಲಾ ಜೊಲ್ಲೆ ಘೋಷಣೆ


ಗುಮ್ಮಟನಗರಿ ವಿಜಯಪುರ ನಗರದ ಒಂದೇ ಏರಿಯಾಗೆ ಸೀಮಿತವಾಗಿದ್ದ ಕೊರೋನಾ ಇದೀಗ ಗ್ರಾಮೀಣ ಭಾಗಕ್ಕೂ ಎಂಟ್ರಿ ಕೊಟ್ಟಿದೆ ಎಂದು ವಿಜಯಪುರ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮಕ್ಕೆ ಕೊರೋನಾ ಎಂಟ್ರಿ ಆಗಿದೆ. ಅದಕ್ಕಾಗಿ ರತ್ನಾಪುರ ಗ್ರಾಮದಲ್ಲಿ ಜನರು ಓಡಾಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. P374 ಮೂಲಕ ರತ್ನಾಪುರ ಗ್ರಾಮಕ್ಕೆ ಕಾಲಿಟ್ಟರುವ ಕೊರೋನಾ ಸೋಂಕಿನಿಂದ ರತ್ನಾಪುರ ಗ್ರಾಮದಲ್ಲಿ ಕಟ್ಟು ನಿಟ್ಟಿನ ಕಟ್ಟೆಚ್ಚರ ವಹಿಸಲಾಗಿದ್ದು, ಗ್ರಾಮದಲ್ಲಿ ಸೋಂಕಿತನ‌ ಮನೆ ಸುತ್ತಮುತ್ತಿನ‌ ಏರಿಯಾ ಸಂಪೂರ್ಣ ಸೀಲಡೌನ್ ಮಾಡಲಾಗಿದೆ ಎಂದರು. ಅಲ್ಲದೇ, ಆತನ‌ ಸಂಪರ್ಕಕ್ಕೆ ಬಂದ ಕುಟುಂಬಸ್ಥರ ಹಾಗೂ ಸಂಭಂದಿಕರ, ಅಕ್ಕಪಕ್ಕದವರು ಒಟ್ಟು, 40 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿ, ಪ್ರಥಮ ಸಂಪರ್ಕಕ್ಕೆ ಬಂದವರ ಗಂಟಲು ದ್ರವದ ಮಾದರಿಯನ್ನ ರವಾನೆ ಮಾಡಲಾಗಿದೆ ಎಂದರು.
ಅಲ್ಲದೇ, ವಿಜಯಪುರದ ಚಪ್ಪರಬಂದ್ ಏರಿಯಾದಲ್ಲಿ 20 ಕೊರೋನಾ ಕೇಸ್ ಹಿನ್ನೆಲೆ ಆ ಏರಿಯಾವನ್ನ ಕ್ಲಸ್ಟರ್ ಏರಿಯಾ ಎಂದು ಸಚಿವೆ ಜೊಲ್ಲೆ ಘೋಷಣೆ ಮಾಡಿದ್ದಾರೆ. ಯಾರು ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿದ್ದು, ಈ ವರೆಗೆ ರೆಡ್ ಜೋನ್ ಆಗಿದ್ದ ಚಪ್ಪರಬಂದ್ ಏರಿಯಾ, ಇದೀಗ ಕ್ಲಸ್ಟರ್ ಏರಿಯಾ ಆಗಿ ಮತ್ತಷ್ಟು ಬಿಗಿ ಕ್ರಮಕೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

0 Comments: