ಕೊರೊನಾ ಸೊಂಕಿತ ಮೃತ ವೃದ್ದನಿಗೆ ಚಿಕಿತ್ಸೆ ಕೊಟ್ಟಿದ್ದ ಆಸ್ಪತ್ರೆ ಕೊರಂಟೈನ್;ವೃದ್ದನಿಂದ ಆಯಾಗೂ ಬಂತು ಕೊರೊನಾ

ಕೊರೊನಾ ಸೊಂಕಿತ ಮೃತ ವೃದ್ದನಿಗೆ ಚಿಕಿತ್ಸೆ ಕೊಟ್ಟಿದ್ದ ಆಸ್ಪತ್ರೆ ಕೊರಂಟೈನ್;ವೃದ್ದನಿಂದ ಆಯಾಗೂ ಬಂತು ಕೊರೊನಾ

ವಿಜಯಪುರದಲ್ಲಿ ಒಂದು ಖಾಸಗಿ ಆಸ್ಪತ್ರೆಯನ್ನು ಫುಲ್ ಕ್ವಾರೈಂಟನ್ ಮಾಡಲಾಗಿದೆ. P257 ವೃದ್ದನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ ಇದಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ‌ ಕೊರೊನಾ ಸೊಂಕಿನಿಂದ ಮೃತಪಟ್ಟ ವೃದ್ದ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ. ಮೊದಲಿಗೆ ಖಾಸಗಿ‌ ಆಸ್ಪತ್ರೆಗೆ ದಾಖಲಾಗಿದ್ದ P257 ಎಂಬ 69 ವರ್ಷದ ವೃದ್ಧನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ತೀವ್ರ ಉಸಿರಾಟ ಸಮಸ್ಯೆಯಿಂದ ಏಪ್ರಿಲ್ 13 ರಂದೇ ಮೃತಪಟ್ಟಿದ್ದ. ವೃದ್ಧ ಮೃತನಾದ ಬಳಿಕ ಏಪ್ರಿಲ್ 14ರ ಆರೋಗ್ಯ ಇಲಾಖೆ ವರದಿಯಲ್ಲಿ ಕರೋನಾ ಸೋಂಕು ದೃಢಪಟ್ಟಿತ್ತು. ಅಲ್ಲದೇ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಯಾ(ಸಫಾಯಿವಾಲಾ) ಗೆ ಸೋಂಕು ದೃಢ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.‌ P257 ಆದ 38 ವರ್ಷದ ಮಹಿಳೆಗೆ ನಿನ್ನೆ ಕರೋನಾ ಸೋಂಕು ದೃಢವಾಗಿದೆ. ಇನ್ನು ಆಸ್ಪತ್ರೆಯ ಸಿಬ್ಬಂದಿಗೆ ಕರೋನಾ ಸೋಂಕು ತಗುಲಿದ್ದು ದೃಢ ಆಗುವ ಮೊದಲೇ ಜಿಲ್ಲಾಡಳಿತ ಕ್ವಾರೈಂಟನ್ ಮಾಡಿತ್ತು.

ಆಸ್ಪತ್ರೆಯ ವೈದ್ಯ, ಸಿಬ್ಬಂದಿ ಸೇರಿ ಸುಮಾರು 35 ಜನ ಹಾಗೂ ಐವರು ರೋಗಿಗಳು ಮತ್ತು ಅವರ ಜೊತೆಗಾರರು 15 ಜನ ಸೇರಿ ಒಟ್ಟು 50 ಜನ ಕ್ವಾರೈಂಟನ್ ನಿಗಾದಲ್ಲಿ ಇದ್ದಾರೆ. ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆಗೆ, ಪರೀಕ್ಷೆ ವೇಳೆ ಒಂದು‌ ಪಾಸಿಟಿವ್ ಬಂದರೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಉಳಿದವರದ್ದು ನೆಗೆಟಿವ್ ಬಂದಿದ್ದರೂ ಸಹ ಮುಂಜಾಗೃತವಾಗಿ 28ದಿನಗಳ ಜಿಲ್ಲಾಡಳಿತ ಕ್ವಾರೈಂಟನ್ ಮಾಡಿದೆ….

0 Comments: