ವಿಜಯಪುರದಲ್ಲಿ ಕೋರೊನಾ ರಣಕೇಕೆ ಹಾಕುತ್ತಲಿದೆ. ಜನಾ ಆತಂಕದಲ್ಲಿ ಇದ್ದು ಅಂತಹವುದರಲ್ಲಿಯೇ ರುಂಡವಿಲ್ಲದ ದೆವ್ವವೊಂದು ತಿರುಗಾಡುತ್ತಾ ಜನರನ್ನು ಭಯಭೀತಗೊಳಿಸ್ತು. ಗಾಬರಿ ಆಗಬೇಡಿ ಇದು ನಿಜವಾದ ದೆವ್ವವಲ್ಲಾ. ಕೊರೋನಾ ಕುರಿತು ವಿಶಿಷ್ಠ ಎಚ್ಚರಿಕೆ ವಹಿಸಬೇಕು ಎಂಬ ಸಾಮಾಜಿಕ ಕಳಕಳಿಯಿಂದ ರುಂಡವಿಲ್ಲದೆ ಕೇವಲ ಮುಂಡದಂತೆ ವೇಷ ಹಾಕಿ ಕರೋನಾ ಕುರಿತು ವಿಜಯಪುರ ನಗರ ನಿವಾಸಿ ಕೆ ಆರ್ ಕಡೇಚೂರ ಅವರಿಂದ ನಡೆಯುತ್ತಿದೆ ಕರೋನಾ ವಿರುದ್ಧದ ಜಾಗೃತಿ ಕಾರ್ಯದ ಒಂದು ಝಲಕ್..
ಹೌದು… ನಾನು ಕೋವಿಡ್ 19ದೆವ್ವ ಇದ್ದೇನೆ., ಹೊರಗೆ ಬಂದ್ರೆ ನಿಮ್ಮನ್ನು ಆವರಿಸುತ್ತೇನೆ., ಮಹಾಜನಗಳೆ ಇತ್ತಕಡೆ ನಿಮ್ಮ ಲಕ್ಷ ಕೊಡಿ., ನನಗೆ ರುಂಡವಿಲ್ಲ, ಕೇವಲ ಮುಂಡವಿದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿ, ಹಳ್ಳಿ ಹಳ್ಳಿಯ ಲ್ಲಿರುತ್ತೆ ನನ್ನ ಸಂಚಾರ., ಯಾರೂ ಹೊರಗೆ ಬರಬೇಡಿ, ಮನೆಯಲ್ಲಿ ಸುರಕ್ಷಿತವಾಗಿರಿ., ನನ್ನಿಂದ ಮಕ್ಕಳು ಹಾಗೂ ಹಿರಿಯರನ್ನು ಕಾಪಾಡಿಕೊಳ್ಳಿ. ಹಗಲೂ ರಾತ್ರಿ ನಾನಿರುವುದರಿಂದ ಹೊರಗೆ ಬಂದು ನನಗೆ ಬಲಿಯಾಗಬೇಡಿ. ಹೀಗೆಂದು ವಿಚಿತ್ರ ವೇಷದಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ..
0 Comments: