ವಿಜಯಪುರದಲ್ಲಿ ಮತ್ತೆ ಕರೋನಾ ರಣಕೇಕೆ ಹಾಕಿದೆ. ಇಂದು ಮತ್ತೆ ಮೂರು ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗೋ ಮೂಲಕ ವಿಜಯಪುರ ನಗರದ ಜನತೆಗೆ ನಡುಕ ಶುರುವಾಗಿದೆ. ಮೂವರು ಮಹಿಳೆಯರಲ್ಲೆ ಪಾಜಿಟಿವ್ ಕೇಸ್ ಕಂಡು ಬಂದಿದೆ.
ಈ ಮೂಲಕ ವಿಜಯಪುರದಲ್ಲಿ 35ಕ್ಕೆ ಏರಿದಂತಾಗಿದೆ. ನಿವೃತ್ತ ಎ ಎಸ್ ಐ ಆಗಿರುವ P306 ಇಂದ ಇಂದು ಮತ್ತೆ ಮೂವರಿಗೆ ಕರೋನಾ ತಗಲಿದೆ. ಈತನೂ ಸಹ ಮಹಾರಾಷ್ಟ್ರದ ಇಚಲಕರಂಜಿಗೆ ಸಂಬಂದಿ ಅಂತ್ಯಕ್ರಿಯೆಗೆ ಹೋಗಿದ್ದ. ಈತನಿಂದ ಇಂದು ಮೂವರಿಗೆ ಕರೋನಾ ದೃಢವಾಗಿದೆ. ಈ ಮೊದಲು ಈತನಿಂದಲೇ ಇಬ್ಬರಿಗೆ ಕರೋನಾ ದೃಢಪಟ್ಟಿತ್ತು.
ಈತನ ಮಗ ಪೊಲೀಸ್ ಪೇದೆಗೆ ಕರೋನಾ ಬಂದಿತ್ತು. ಅಲ್ಲದೆ ಇವರ ಜೊತೆ ಇದ್ದ ಕಾರು ಚಾಲಕನಿಗೂ ಕರೋನಾ ಬಂದಿದ್ದು, ಆತ ಈಗಾಗಲೇ ಮೃತಪಟ್ಟಿದ್ದಾನೆ. ಒಟ್ನಲ್ಲಿ ವಿಜಯಪುರ ದಲ್ಲಿ ರಣಕೇಕೆ ಹಾಕಿ ಅಟ್ಟಹಾಸ ಮೆರೆಯುತ್ತಿದೆ..
0 Comments: