ಕೊರೊನಾ ಸರ್ವೆ ಮಾಡಲು ಬಂದಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ

ಕೊರೊನಾ ಸರ್ವೆ ಮಾಡಲು ಬಂದಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ

ಕೊರೊನಾ ವಾರಿಯರ್ಸ್‌ ಮೇಲೆ ಅಲ್ಲಲ್ಲಿ ದಾಳಿ ಆಗುತ್ತಿರುತ್ತವೆ. ಬೆಂಗಳೂರಿನ ಪಾದ ನಾರಾಯಣಪುರ ಘಟನೆ ಮರೆಯುವ ಮುಂಚೆ ಮತ್ತೊಂದು ಹಲ್ಲೆ ಪ್ರಕರಣ ನಡೆದಿದೆ.

ಕೊರೋನಾ ಕುರಿತು ಸರ್ವೇ ಮಾಡಲು ಬಂದಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಿದ್ದ ವೇಳೆ ಕಾರ್ಯ ಕರ್ತೆಯ ಬಳಿಯಿದ್ದ ಸರ್ವೇ ಪುಸ್ತಕ ಕಿತ್ತುಕೊಂಡು ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ


ಆಶಾ ಕಾರ್ಯಕರ್ತೆ ಸಾವಿತ್ರಿ ಬಡಿಗೇರ ಎಂಬುವವರ ಮೇಲೆ ಹಲ್ಲೆಗೆ ಯತ್ನ ನಡೆದು ಈ ವೇಳೆ ಪರಸ್ಪರ ವಾಗ್ವಾದ, ಕಾರ್ಯಕರ್ತೆ ಕೈ ಹಿಡಿದು ಓರ್ವ ಮಹಿಳೆ ಎಳೆದಾಡಿದ್ದಾಳೆ. ಮಾತಿಗೆ ಮಾತು ಬೆಳೆದು ಕಾರ್ಯಕರ್ತೆಗೂ ಹಾಗೂ ಇನ್ನೊಂದು ಮಹಿಳೆ ಕುಟುಂಬ ದವರಿಗೂ ವಾಗ್ವಾದ ನಡೆದಿದ್ದು ಪದೆ ಪದೆ ನಮ್ಮ ಏರಿಯಾಗೆ ಯಾಕೆ ಬರುತ್ತೀರಿ ಎಂದು ಹಲ್ಲೆಗೆ ಒಂದು ಕುಟುಂಬಸ್ಥರು ಮುಂದಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

0 Comments: