ಕಾಯಿಪಲ್ಯ ಮಾರುವ ವ್ಯಕ್ತಿ ಬೈಕ್ ಅಪಘಾತ; ಸ್ಥಳದಲ್ಲೆ ದುರ್ಮರಣ

ಕಾಯಿಪಲ್ಯ ಮಾರುವ ವ್ಯಕ್ತಿ ಬೈಕ್ ಅಪಘಾತ; ಸ್ಥಳದಲ್ಲೆ ದುರ್ಮರಣ

ಕಾಯಿಪಲ್ಯೆ ಮಾರಲು ಬಂದಿದ್ದ ವ್ಯಕ್ತಿಯೋರ್ವ ಬೈಕ್ ಮೇಲೆ ಹೋಗುವಾಗ ನಾಯಿಗೆ ಹಾಯಿಸಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ೬.೩೦ ಕ್ಕೆ ವಿಜಯಪುರ ಜಿಲ್ಲೆಯ ಆಲಮಟ್ಟಿ-ನಿಡಗುಂದಿ ರಸ್ತೆಯ ಚಿಮ್ಮಲಗಿ ಮಠದ ಸಮೀಪ ನಡೆದಿದೆ. ಕೊಲ್ಹಾರ ತಾಲ್ಲೂಕಿನ ಕವಲಗಿ ಗ್ರಾಮದ ಶಿವಶರಣ ಗುರುಲಿಂಗಪ್ಪ ಬಿರಾದಾರ (25) ಮೃತ ಯುವಕ.
ಲಾಕ್ ಡೌನ್ ಇರುವ ಕಾರಣ ಕವಲಗಿ ಗ್ರಾಮದಿಂದ ನಿತ್ಯ ಕಾಯಿಪಲ್ಲೆ ತೆಗೆದುಕೊಂಡು ಬಂದು ನಿಡಗುಂದಿ, ಆಲಮಟ್ಟಿ ಸುತ್ತ ಮಾರಾಟ ಮಾಡುತ್ತಿದ್ದನು
ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ನಾಯಿ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಬೈಕ್ ನಿಂದ ಕೆಳಗೆ ಬಿದ್ದಾಗ ತೆಲೆಗೆ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

0 Comments: