ಕೊರೊನಾ ವಾರಿಯರ್ಸ್‌ಗಳ ಮೇಲೆ ಹಲ್ಲೆ ಮಾಡುವವರು ಮನುಷ್ಯರೆ ಅಲ್ಲ, ಇದೊಂದು ಅಸಹ್ಯ ಹಾಗೂ ಹೇಸಿಗೆ ಕೆಲಸ ಎಂದು ಪಾದರಾಯನಪುರ ಗಲಾಟೆ ಪ್ರಕರಣವನ್ನ ವಿಜಯಪುರದಲ್ಲಿ ಮಾಜಿ ಗೃಹ ಸಚಿವ ಎಂ ಪಾಟೀಲ್ ಖಂಡಿಸಿದರು.
ಜನರು ಇಂಥವ್ರನ್ನ ಕ್ಷಮಿಸಬಾರದು. ಕಾನೂನಾತ್ಮಕ ಅತಿ ಕಠಿಣವಾದ ಶಿಕ್ಷೆಯನ್ನ ನೀಡಬೇಕು ಎಂದು ಆಗ್ರಹಿಸಿದರು. ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ, ಇದನ್ನ ಸಹಿಸಿಕೊಳ್ಳಲು ಆಗಲ್ಲ.ಅನಕ್ಷರಸ್ಥ, ಮುಗ್ದ ಜನರಿಗೆ ಅಲ್ಲಿನ ಮುಖಂಡರು, ಕಾರ್ಪೋರೆಟರ್ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು. ಇಂಥ ಘಟನೆ ಮರುಕಳಿಸಬಾರದು. ಜೀವ ಒತ್ತೆ ಇಟ್ಟು ವಾರಿಯರ್ಸ್ ಕೆಲಸ ಮಾಡ್ತಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕರೊನಾ ಸೋಂಕು ತಗಲುತ್ತಿದೆ. ದಿನದಿಂದ ದಿನಕ್ಕೆ ವೈದ್ಯರ ಸಂಖ್ಯೆ ಕಡಿಮೆ ಆಗ್ತಿದೆ. ನಾಳೆ ವೈದ್ಯರೇ ಹಿಂದೆ ಸರಿದರೇ ಏನ್ ಮಾಡ್ತೀರಿ? ಎಂದು ಪ್ರಶ್ನಿಸಿದರು. ಅಲ್ಲದೆ ವೈದ್ಯರು ಚಿಕಿತ್ಸೆ ನೀಡಲ್ಲ ಎಂದು ಹಿಂದೆ ಸರಿದರೆ ಅದೊಂದು ದೊಡ್ಡ ಅನಾಹುತವಾಗುತ್ತೆ. ತಪ್ಪು ಮಾಡಿದವರು ಯಾವುದೇ ಧರ್ಮದವರು ಆಗಿದ್ರು ಕಠಿಣ ಕ್ರಮವಾಗಲೆ ಬೇಕು. ಇದನ್ನ ತಡೆಯುವ ಸಾಮೂಹಿಕ ಪ್ರಯತ್ನವಾಗಬೇಕಿದೆ ಎಂದರು.
0 Comments: