ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಸಂಸದೆ ಸುಮಲತಾ

ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಸಂಸದೆ ಸುಮಲತಾ

ಮಂಡ್ಯ : ಈ ಕೊರೋನಾ ಸಮಯದಲ್ಲಿ ಪ್ರತಿಯೊಂದಕ್ಕೂ ರಾಜಕಾರಣ ಮಾಡಿದರೆ ನನ್ನ ರಕ್ತ ಕುದಿಯುತ್ತದೆ ಎಂದ ಸಂಸದೆ ಸುಮಲತಾ ಅಂಬರೀಷ್​ ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಸುಮಲತಾ, ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಸಭೆಯ ಅರ್ಧದಲ್ಲೇ ಎದ್ದು ಹೊರನಡೆದರು. ಅಲ್ಲದೆ ಜೆಡಿಎಸ್ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಎಷ್ಟೋ ಚುನಾವಣೆಗಳನ್ನು ಗೆದ್ದು ಬಂದಿದ್ದಾರೆ. ಕೋವಿಡ್(Covid-19) ಸಮಯದಲ್ಲಿ ಸಲಹೆ ಕೊಡುವುದನ್ನು ಬಿಟ್ಟು ಕಿರುಚಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇಲ್ಲೇನು ಡ್ರಾಮ ನಡೆಯುತ್ತಿದೆಯೇ?ಎಂದು ಸುಮಲತಾ ಪ್ರಶ್ನಿಸಿದರು.

ರಾಜಕಾರಣ ಇಷ್ಟವಿಲ್ಲ, ಇಂತಹ ರಾಜಕಾರಣ ಬೇಕಿಲ್ಲ. ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಲು ನನ್ನ ಕೈಲಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಿದ್ದೇನೆ. ಬೇರೆಯವರ ರೀತಿ ಸಭೆ, ಸಮಾರಂಭಗಳಿಗೆ ಹೋಗಿ ಫೋಟೋಗೆ ಫೋಸ್ ಕೊಡಲ್ಲ, ಕೆಲಸ ಮಾಡುತ್ತೇನೆ, ಕೆಲಸ ಮಾಡಲು ಮಾನವೀಯತೆ ಬೇಕು ಎಂದರು.

ನಾನು ಒಬ್ಬಳು ಸಂಸದೆಯಾಗಿ ಆಕ್ಸಿಜನ್ ಸಿಲಿಂಡರ್(Oxygen Cylinder) ಅನ್ನು ತಂದಿದ್ದೇನೆ. ಈ ಬಗ್ಗೆ ಅವರ ಕ್ಷೇತ್ರದ ಜನತೆ ಕೇಳಿರಬೇಕು. ಅದಕ್ಕಾಗಿ ಒಬ್ಬೊಬ್ಬರೂ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣ ಮಾಡಿಕೊಳ್ಳಲಿ, ಮುಂದೆಯೂ ಮಾಡಲಿ. ನನಗೇನು ಬೇಜಾರಿಲ್ಲ. ಕೋವಿಡ್ ಸಮಯದಲ್ಲಿ ಮಾನವೀಯತೆ ತೋರುವುದನ್ನು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ನನಗೆ ಜನತೆ ಆಶೀರ್ವಾದ ಮಾಡಿರುವುದರಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ಕೇವಲ ಅವರ ನಾಯಕರ, ಪಕ್ಷ(Party)ದ ಬಗ್ಗೆ ಮಾತನಾಡುತ್ತಾರೆ. ಮಾತನಾಡೋರೆ ಬೇರೆ, ಕೆಲಸ ಮಾಡೋರೆ ಬೇರೆ. ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾತನಾಡಲು ಬಿಡುತ್ತಿಲ್ಲ ಎಂದು ಟೀಕಿಸಿದರು



0 Comments: