ವಿಜಯಪುರದಲ್ಲಿ ಮತ್ತೆ 11 ಜನರಿಗೆ ಕೊರೋನಾ ಸೊಂಕು ಹರಡುವ ಮೂಲಕ ವಿಜಯಪುರ ಬೆಚ್ಚಿ ಬಿದ್ದಿದೆ.ವಿಜಯಪುರ ನಗರದ ಚಪ್ಪರಬಂದ್ ಏರಿಯಾ ಕೊರೊನಾ ಹಾಟ್‌ಸ್ಪಾಟ್ ಆದಂತಾಗಿದೆ. ಇಲ್ಲಿಯವರೆಗೆ 32 ಜನರಲ್ಲಿ ಕೊರೊನಾ ದೃಢವಾಗಿದ್ದು ಇಬ್ಬರ ಸೋಂಕಿತರ ಸಾವು ಸಂಭವಿಸಿದೆ.
ಎರಡು ದಿನಗಳ ಕಾಲ ಯಾವುದೇ ಪಾಜಿಟಿವ್ ವರದಿ ಬಾರದೇ ನಿರಾಳವಾಗಿದ್ದ ವಿಜಯಪುರ ಜನತೆ ಒಂದೇ ದಿನದಲ್ಲಿ 11 ಜನರಿಗೆ ಹಬ್ಬಿದ ಸುದ್ದಿ ಕೇಳಿ ಆತಂಕ ಗೊಂಡಿದ್ದಾರೆ. 7 ವರ್ಷದ ಬಾಲಕಿ, 10, 14 ವರ್ಷದ ಇಬ್ಬರು ಬಾಲಕರಿಗು ಸೋಂಕು ತಗುಲಿದೆ. 8 ಹೆಣ್ಣು ಮಕ್ಕಳಿಗು ಕೊರೊನಾ ಸೋಂಕು ದೃಢವಾಗಿದೆ. ಎರಡು ಕುಟುಂಬಗಳಲ್ಲಿ ಕೊರೊನಾ ಮಹಾಮಾರಿ ಹರಡಿದೆ. ವೃದ್ದೆ P-221 ರಿಂದ ಬರೊಬ್ಬರಿ 7 ಜನರಿಗೆ ಕೊರೊನಾ ಸೋಂಕು ತಗುಲಿದೆ. P-362 ಪೇಶೆಂಟ್ ನಿಂದ ಮೂವರಿಗೆ ಹಾಗೂ P-228 ಪೇಶೆಂಟ್ ನಿಂದ ಓರ್ವರಿಗೆ ಕೊರೊನಾ ಹರಡಿದೆ…
0 Comments: