ತಪ್ಪು ಯಾರೇ ಮಾಡಿದ್ರು ಅದು ತಪ್ಪು ಅದ್ಯಾವದಕ್ಕೂ ನಾವು ಬೆಂಬಲ ಕೊಡಲ್ಲ, ನಿರ್ದಿಷ್ಟವಾಗಿ ಇದರಲ್ಲಿ ಯಾರ ಕೈವಾಡ ಇದೆ ಎಂಬುದು ನನಗೆ ಗೊತ್ತಿಲ್ಲ ಎಂದು ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ದಲ್ಲಿ ಮಾತನಾಡಿ ಸರ್ಕಾರ ಈ ಕುರಿತು ತನಿಖೆ ಮಾಡಲೇಬೇಕು. ಸಣ್ಣ ಪುಟ್ಟ ಘಟನೆಗಳನ್ನು ಸರ್ಕಾರ ತನಿಖೆ ಮಾಡುತ್ತದೆ. ಜನ ಸ್ಪಲ್ಪ ತಾಳ್ಮೆ ಇಟ್ಟುಕೊಳ್ಳಬೇಕು. ಇಷ್ಟು ದಿನ ನಾವು ಈಗಾಗಲೇ ಮುಗಿಸಿದ್ದೇವೆ. ಇನ್ನೂ ನಾಲ್ಕಾರು ದಿನ ಮುಗಿಸಿದರೆ ಆಯಿತಲ್ಲ. ಅದರ ಪ್ರತಿಫಲ ದೇಶಕ್ಕೆ ಸಮಾಜಕ್ಕೆ ಸಿಕ್ಕೆ ಸಿಗುತ್ತದೆ ಎಂದ ಶಿವಾನಂದ ಪಾಟೀಲ್ ಭರವಸೆ ವ್ಯಕ್ತಪಡಿಸಿದರು…
0 Comments: