ವಿಜಯಪುರ: ಸರಳ ಮದುವೆಯಾಗಿ 50 ಸಾವಿರ ರೂ ಮೌಲ್ಯದ ಅಗತ್ಯ ಸಾಮಾಗ್ರಿ ಹಂಚಿದ ಜೋಡಿ

ವಿಜಯಪುರ: ಸರಳ ಮದುವೆಯಾಗಿ 50 ಸಾವಿರ ರೂ ಮೌಲ್ಯದ ಅಗತ್ಯ ಸಾಮಾಗ್ರಿ ಹಂಚಿದ ಜೋಡಿ

ವಿಜಯಪುರ: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಸರಳ ಮದುವೆಯಾದ ನವ ದಂಪತಿ ಮದುವೆಗೆಂದು ಖರ್ಚು ಮಾಡಲಿದ್ದ 50 ಸಾವಿರ ರೂ. ಹಣದಲ್ಲಿ ಬಡವರಿಗೆ ಅಗತ್ಯ ಆಹಾರ ಧಾನ್ಯ ಹಂಚಿ‌ ಮಾದರಿ ಸೇವೆ ಮಾಡಿದ್ದಾರೆ.

ವಿಜಯಪುರ ತಾಲೂಕಿನ‌ ಬೊಮ್ಮನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16 ರಂದು ಸರಳವಾಗಿ ಮದುವೆಯಾದ ಅನೀಲ ಹಾಗೂ ಲಕ್ಷ್ಮೀ, ಮದುವೆಗೆ ಬಳಸದ 50 ಸಾವಿರ ರೂ. ಮೌಲ್ಯದ ಆಹಾರ ಧಾನ್ಯಗಳನ್ನು ತಮ್ಮ ಗ್ರಾಮದ ಬಡತನದಲ್ಲಿದ್ದ ಸುಮಾರು 80 ಕುಟುಂಬಗಳ ಜನರಿಗೆ ಅಕ್ಕಿ, ಬೆಲ್ಲ, ಸಕ್ಕರೆ, ಸಾಬೂನು, ಎಣ್ಣೆ, ಬೇಳೆ, ಹಿಟ್ಟು, ಉಪ್ಪು, ಬಿಸ್ಕತ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

ಕೋವಿಡ್-19 ಲಾಕಡೌನ್ ಸಂದರ್ಭದಲ್ಲಿ ಸ್ವಗ್ರಾಮದ ಜನರಿಗೆ ನೆರವಾಗುವ ಮೂಲಕ ತಮ್ಮ ಮದುವೆಯನ್ನು ಸ್ಮರಣೀಯ ಮಾಡಿಕೊಂಡ ನವ ದಂಪತಿಯ ಮಾನವೀಯ ಕಾರ್ಯಕ್ಕೆ ಗ್ರಾಮಸ್ತರು‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

0 Comments: