ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಇಂದು ಮತ್ತೇ ಏಳು ಪಾಸಿಟಿವ್ ಪ್ರಕರಣಗಳು ಪತ್ತೆಯಾಗೋ ಮೂಲಕ ವಿಜಯಪುರ ಜನಾ ಬೆಚ್ಚಿ ಬಿದ್ದಿದ್ದಾರೆ. ಒಟ್ಟು 17 ಪಾಸಿಟಿವ್ ಕೊರೊನಾ ದೃಢವಾಗಿದ್ದು ನಿನ್ನೆವರೆಗೆ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು.
ಇಂದು ಮತ್ತೆ ಏಳು ಜನರಲ್ಲಿ ಪಾಸಿಟಿವ್ ಪತ್ತೆಯಾಗಿದೆ. 65, 66 ಹಾಗೂ 37 ವರ್ಷದ ಮೂವರು ಪುರುಷರು, 12 ವರ್ಷದ ಬಾಲಕ, 70 ವರ್ಷದ ವೃದ್ಧೆಯಲ್ಲಿ ಒಂದೂವರೆ ವರ್ಷದ ಬಾಲಕಿಯಲ್ಲಿ ಕೊರೊನಾ ದೃಢವಾಗಿದೆ. ಕೊರೊನಾ ಪಾಜಿಟಿವ್ 60 ವರ್ಷದ ಕೇಸ್ ನಂಬರ್ 221 ರ ಮಹಿಳೆಯ ಸಂಪರ್ಕದಿಂದ ಐವರಿಗೆ ಸೋಂಕು ತಗುಲಿದೆ.
ಕೇಸ್ ನಂಬರ್ 228 ಹಾಗೂ 232ರ ಸಂಪರ್ಕದಿಂದ ಒಂದೂವರೆ ವರ್ಷದ ಬಾಲಕಿಗೆ ಸೋಂಕು ತಗುಲಿದ್ದರಿಂದ ಇಲ್ಲಿಯವರೆಗೆ ಒಟ್ಟು 17 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈಗಾಗಲೇ ಒಬ್ಬ ವಯೋವೃದ್ದ ಕೊರೊನಾ ಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು..
0 Comments: