ಬೆಂಗಳೂರು : ಇನ್ಮುಂದೆ ಕಿಡಿಗೇಡಿಗಳ ವಿರುದ್ಧ ಸಾಫ್ಟ್ ನಡೆ ಇಲ್ಲ. ಇಷ್ಟು ದಿನ ಸಾಫ್ಟ್ ನಡೆ ಅನುಸರಿಸಿದ್ದೇ ತಪ್ಪಾಯಿತು. ಹೀಗಾಗಿ ಪೊಲೀಸರಿಗೆ ಸಂಪೂರ್ಣ ಪವರ್ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇಂದು ಸಚಿವ ಸಂಪುಟ ಸಭೆಯಲ್ಲಿ ಪಾದರಾಯನಪುರದಲ್ಲಿ ಕಳೆದ ರಾತ್ರಿ ನಡೆದ ಗಲಾಟೆ ಕುರಿತಂತೆ ಚರ್ಚೆ ನಡೆಯಿತು. ಈ ವೇಳೆ, ಸಚಿವರಾದ ಆರ್.ಅಶೋಕ್, ಶ್ರೀರಾಮುಲು, ಸಿ.ಟಿ.ರವಿ ಸೇರಿದಂತೆ ಹಲವರು ಈ ಘಟನೆ ಕುರಿತಂತೆ ಕಿಡಿಕಾರಿದರಲ್ಲದೇ, ಸಾದಿಕ್ ಪಾಳ್ಯದಲ್ಲಿ ನಡೆದ ಘಟನೆಯ ವೇಳೆಯೇ ಖಡಕ್ ಸೂಚನೆ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಒತ್ತಾಯಿಸಿದರು. ಅಲ್ಲದೇ, ಸಿಎಂ ಹಾಗೂ ಗೃಹ ಸಚಿವರ ಸಾಫ್ಟ್ ನಡೆ ಇಂತಹ ವೇಳೆ ಸರಿಯಲ್ಲ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.
ಈ ವೇಳೆ, ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಇನ್ಮುಂದೆ ಯಾರೇ ಗೂಂಡಾಗಿರಿ, ಹಲ್ಲೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಅಂತಹವ ವಿರುದ್ಧ ಕಠಿಣ ಕ್ರಮ ನಿಶ್ಚಿತ.
ಇದಕ್ಕೆ ಪೊಲೀಸರಿಗೆ ಸಂಪೂರ್ಣ ಪವರ್ ನೀಡುವುದಾಗಿ ಸಿಎಂ ಸ್ಪಷ್ಟಪಡಿಸಿದರು. ಅಲ್ಲದೇ, ದಂಡಂ ದಶಗುಣಂ ನೀತಿ ಅನುಸರಿಸಲಾಗುತದೆ. ಇನ್ಮುಂದೆ ಇಂತಹ ಘಟನೆಗಳ ಬಗ್ಗೆ ಸಾಫ್ಟ್ ಆಗುವ ಪ್ರಶ್ನೆಯೇ ಇಲ್ಲ. ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು…
0 Comments: