ವಿಜಯಪುರ ಜಿಲ್ಲೆಯಲ್ಲಿ ಇನ್ನು‌ ಮುಂದೆ ಪಾಜಿಟಿವ್ ಪ್ರಕರಣ ಬರಲಿಕ್ಕಿಲ್ಲ;ಆತ್ಮಸ್ಥೈರ್ಯ ಹೇಳಿದ ಜೊಲ್ಲೆ ಮೇಡಮ್

ವಿಜಯಪುರ ಜಿಲ್ಲೆಯಲ್ಲಿ ಇನ್ನು‌ ಮುಂದೆ ಪಾಜಿಟಿವ್ ಪ್ರಕರಣ ಬರಲಿಕ್ಕಿಲ್ಲ;ಆತ್ಮಸ್ಥೈರ್ಯ ಹೇಳಿದ ಜೊಲ್ಲೆ ಮೇಡಮ್

ವಿಜಯಪುರ ಜಿಲ್ಲೆಯಲ್ಲಿ 35 ಕೊರೊನಾ ಪಾಜಿಟಿವ್ ವರದಿ ಬಂದಿವೆ, 2 ಸಾವು ಸಂಭವಿಸಿವೆ. ವಿಜಯಪುರ ಜಿಲ್ಲೆಯಲ್ಲಿ ಇನ್ನು‌ ಮುಂದೆ ಪಾಜಿಟಿವ್ ಪ್ರಕರಣ ಬರಲಿಕ್ಕಿಲ್ಲ ಎನ್ನುವ ವಿಶ್ವಾಸವಿದೆ ಎಂದು ಹೇಳೊ ಮೂಲಕ ಕೊರೊನಾ ಭೀತಿಯಲ್ಲಿದ್ದ ವಿಜಯಪುರ ಜನತೆಗೆ ಆತ್ಮಸ್ಥೈರ್ಯ ತುಂಬು ಹೇಳಿಕೆ ನೀಡಿದ್ದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮೆಡಮ್..
ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ಕೊವಿಡ್ ಕುರಿತು ಜಿಲ್ಲಾಡಳಿತದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ್ರು. ವಿಜಯಪುರ ದಲ್ಲಿ ಸದ್ಯ ಉಳಿದೆಲ್ಲ ಸೋಂಕಿತರು ಆರಾಮಾಗಿದ್ದಾರೆ, ಯಾವುದೇ ತೊಂದರೆ ಇಲ್ಲ ಎನ್ನೋ ಮೂಲಕ ಆಶಾಕಿರಣ ಮೂಡಿಸಿದ್ದಾರೆ. ಎರಡು ಮೂರು ಕುಟುಂಬಗಳಲ್ಲಿ ಕೊರೊನಾ ಪಾಜಿಟಿವ್ ಪ್ರಕರಣಗಳು ಕಂಡು ಬರ್ತಿವೆ. ಮೊದಲನೇ ಹಂತದ ಸಂಪರ್ಕದಲ್ಲಿದ್ದ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ರು.
ಕ್ಲಸ್ಟರ್ ಎರಿಯಾಗಳಲ್ಲಿ ಡ್ರೋಣ್ ಹಾಗೂ ಪೊಲೀಸರ ಮೂಲಕ ಬಿಗಿ ಕಾವಲು ಹಾಕಲಾಗಿದೆ. ಅಲ್ಲಿನ ಜನರಿಗೆ ಪಾಲಿಕೆ ಕಮಿಷನರ್ ನೇತೃತ್ವದಲ್ಲಿ ಔಷಧಿ ಒದಗಿಸಲಾಗ್ತಿದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಒಂದು ಪಾಜಿಟಿವ್ ಕಂಡು ಬಂದ ರತ್ನಾಪುರ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಗ್ರಾಮದಲ್ಲಿ ತಿಕೋಟಾ ತಹಶೀಲ್ದಾರ್ ನೇತೃತ್ವ ವಹಿಸಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯನ್ನು 200 ಬೆಡ್ ಹಾಸ್ಪಿಟಲ್ ಕೋವಿಡ್ ಆಸ್ಪತ್ರೆಯಾಗಿ ಉಪಯೋಗಿಸಿ ಕೊಳ್ಳಲಾಗ್ತಿದೆ. ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ್ದೀನಿ ಅಲ್ಲಿನ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಡಯಾಲಿಸಿಸ್ ಪೇಶೆಂಟ್, ಗರ್ಭಿಣಿಯರು, ಹಿರಿಯ ನಾಗರಿಕರ ಬಗ್ಗೆ ಮಾಹಿತಿ ಸಂಗ್ರಹಣೆ ಕಾರ್ಯ ನಡೆಸಲಾಗುತ್ತಿದೆ ಎಂದ್ರು…

0 Comments: