4 ನೇ ತಾರಿಖಿನಿಂದ ವಿಜಯಪುರ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟಿಗೆ ಗ್ರೀನ್ ಸಿಗ್ನಲ್: ಸಚಿವೆ ಜೊಲ್ಲೆ ಮೆಡಮ್

4 ನೇ ತಾರಿಖಿನಿಂದ ವಿಜಯಪುರ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟಿಗೆ ಗ್ರೀನ್ ಸಿಗ್ನಲ್: ಸಚಿವೆ ಜೊಲ್ಲೆ ಮೆಡಮ್

ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲೆಯ ಕೊರೋನಾ ಕುರಿತು ಮಾಹಿತಿ ಪಡೆದರು. ಬಳಿಕ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಪಾಸಿಟಿವ್ ಪ್ರಕರಣದ ಪ್ರಾಥಮಿಕ ಕಾಂಟ್ಯಾಕ್ಟ ಪರಿಶೀಲಿಸಲಾಗುತ್ತಿದೆ, ಇಲ್ಲಿಯ ವರೆಗೆ ೪೬ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಬಂದಿದೆ. ಕೊರೋನಾ ಪೀಡಿತರು ೧೧ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.
ಜಿಲ್ಲೆಯಲ್ಲಿರುವ ನಾಲ್ಕು ಕಂಟೇನ್ಮೇಂಟ್ ಜೋನ್ ಹಾಗೆ ಮುಂದುವರೆಸಲಾಗಿದೆ. ಆ ಭಾಗದಲ್ಲಿ ಪರಿಶೀಲನೆಗಾಗಿ ನಾಲ್ಕು ತಂಡಗಳನ್ನು ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿಯೇ ಲ್ಯಾಬ್ ಟೆಸ್ಟ ಮಾಡುವ ಬೇಡಿಕೆ ಇತ್ತು ಹೀಗಾಗಿ ಇಂದಿನಿಂದಲೇ ಒಂದು ಲ್ಯಾಬ್ ಇಲ್ಲಿಯೇ ಪ್ರಾರಂಭವಾಗುತ್ತದೆ.
ಇದರ ಮೂಲಕ ದಿನಕ್ಕೆ ೨೫ ರಿಂದ ೩೦ ಜನರ ಟೆಸ್ಟ ಮಾಡಬಹುದಾಗಿದೆ ಎಂದರು. ಇನ್ನೂ ವಿಜಯಪುರ ಜಿಲ್ಲೆ ಆರೇಂಜ್ ಜೋನ್ ನಲ್ಲಿ ಬರುವದರಿಂದ. ಸಿಟಿ ಬಿಟ್ಟರೆ ತಾಲೂಕು ಕೇಂದ್ರಗಳಲ್ಲಿ ನಾಲ್ಕನೇ ತಾರಿಖಿನಿಂದ ಪ್ರಾರಂಭ ಮಾಡಲಾಗುವದು. ಅಲ್ಲಿಯ ವ್ಯವಾಹಾರಗಳಿಗೆ ಗ್ರೀನ್ ಸಿಗ್ನಲ್ ನೀಡುವದ ಜೊತೆಗೆ ಮಹಾರಾಷ್ಟ್ರದಿಂದ ಬರುವವರಿಗೆ ಮಾನದಂಡ ಹಾಕಲಾಗುತ್ತದೆ, ಬೇರೆ ರಾಜ್ಯದಿಂದ, ಬೇರೆ ಬೇರೆ ಜಿಲ್ಲೆಯಿಂದ ಬಂದಂತವರ ಹೆಲ್ತ ಸರ್ಪಿಫಿಕೇಟ್ ತರಬೇಕು. ಇನ್ನೂ ಇಂಡಿ, ನಾಗಠಾಣ ಮತಕ್ಷೇತ್ರಗಳು ಮಹಾರಾಷ್ಟ್ರದ ಗಡಿಯಲ್ಲಿ ಬರುವದರಿಂದ ಆ ಭಾಗದ ಶಾಸಕರ ನಿರ್ಣಯದ ಅನುಗುಣವಾಗಿ ಆ ಭಾಗದಲ್ಲಿ ವ್ಯಾಪಾರ ವಹಿವಾಟು ಆರಂಭಿಸಲಾಗುತ್ತದೆ ಎಂದರು…

0 Comments: