ನವದೆಹಲಿ, ಏಪ್ರಿಲ್ 11: ಭಾರತದಲ್ಲಿ ಕೊರೊನಾ ವೈರಸ್ ಗಾಢವಾಗಿ ಹರಡಿದೆ. ಹೀಗಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಲಾಕ್‌ಡೌನ್‌ಗಿಂತ ಮೊದಲು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಲವು ವಿದೇಶಿಯರು ಇಲ್ಲೇ ಸಿಲುಕಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯವನ್ನು ನಿಲ್ಲಿಸಿವೆ. ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಅವರು ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗಿಲ್ಲ. ಅಂತವರನ್ನು ಪತ್ತೆ ಹಚ್ಚಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹಾಯವಾಣಿಯನ್ನು ತೆರೆದಿದೆ.
from Oneindia.in - thatsKannada News https://ift.tt/39WNYzz
via
from Oneindia.in - thatsKannada News https://ift.tt/39WNYzz
via
0 Comments: